Monday, August 6, 2007

ಓ ನನ್ನ ಚೇತನಾ....

ಓ ನನ್ನ ಚೇತನ,
ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗನ೦ತವಾಗಿ ಏರಿ,
ಓ ನನ್ನ ಚೇತನ,ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,ಆಗು ನೀ ಅನಿಕೇತನ!

ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,ಆಗು ನೀ ಅನಿಕೇತನ!

ಕುವೆಂಪುರವರ ಅವರ ವಿಶ್ವ ಮಾನವ ಸಂದೇಶ ಸಾರುವ ಈ ಗೀತೆ ನನ್ನ ಮೆಚ್ಚಿನ ಕವನಗಳಲ್ಲಿ ಒಂದು.. ಹಿಂದೆ ನಮ್ಮ ಶಾಲೆಯ ಪಠ್ಯ ಪುಸ್ತಕದಲ್ಲಿ ಈ ಪದ್ಯ ಇತ್ತಾದರೂ ಅದರ ಸಮಗ್ರ ಸಂದೇಶ ನನಗೆ ಆಗ ತಿಳಿದಿರಲಿಲ್ಲ... ಈಗ ಮತ್ತೊಮ್ಮೆ ಅದನ್ನು ಓದಿದಾಗ ಒಂದು ಕುವೆಂಪು ಅವರ ಹಿರಿಮೆ ತಿಳಿಯುತ್ತದೆ... ಅವರು ಕನ್ನಡದ ಹೆಮ್ಮೆ:-)

4 comments:

Richy said...

This shows his broad mindedness.
I heard this song on radio recently.
The poem is written in such a way that the composition has to be beautiful!!! :)

Anu said...

grr.....kannada blog :((

Archana & Darshan said...

Anu,
t will be in both languages... dont worry

hhhh said...

Nice one:)